ಲಕ್ಷ್ಮೇಶ್ವರ ನಮ್ಮೂರು... ಹುಟ್ಟಿದ್ದು ಗದಗದಾಗ ಆದರ ಬೆಳದಿದ್ದು ಲಕ್ಷ್ಮೇಶ್ವರದಾಗ. ಅಲ್ಲೇ ಶ್ಯಾಲಿ ಓದಿದ್ದು. ಆಮ್ಯಾಲ ಮತ್ತ ಓದಾಕ ಬಂದಿದ್ದು ಗದಗ, ಹುಬ್ಬಳ್ಳಿ ಆಮ್ಯಾಲ ಧಾರವಾಡ... ಈಗ ಬೆಂಗ್ಳೂರಿನ್ಯಾಗ ಕೆಲಸಾ.
ಲಕ್ಷ್ಮೇಶ್ವರ ಊರನ್ನ ಆಡೋ ಮಾತಿನ್ಯಾಗ ಎಲ್ಲಾರೂ ಲಕ್ಷ್ಮೀಶ್ವರ ಅಂತಾನ ಕರೀತಾರ. ನಾ ಲಕ್ಷ್ಮೀಶ್ವರಾನ ಬಿಟ್ಟು ಭಾಳ ವರ್ಷಾ ಆದಮ್ಯಾಗ ಮತ್ತ ಹೋಗಿದ್ದು ಸ್ವಲ್ಪ ವರ್ಷದ ಹಿಂದ. ಅಷ್ಟೊಂದು ವರ್ಷಾ ಆದಮ್ಯಾಗೂ ಲಕ್ಷ್ಮೀಶ್ವರಾ ಒಂಚೂರು ಬದಲಾಗಿಲ್ಲ. ಹಾಂಗ ಐತಿ! ಅದ್ಯಾಕೋ ಒಂಥರಾ ಆ ಊರಂದ್ರ ಇಷ್ಟಾ ಆಕೈತಿ.
ಆ ಊರಿನ ವಿಷಯಾ ಬಂತಂದ್ರ ಮಣಗಟ್ಟಲೇ ನೆನಪು ಸರಾಸರಾ ಆಗಿ ಸಿನಿಮಾದಂಗ ಕಣ್ಣಮುಂದ ಹೊಕ್ಕಾವು. ಅಂಥಾ ನೆನಪಿನ್ಯಾಗ ಒಂದನ್ನ ನಿಮ್ಮ ಮುಂದ ಇಡಾಕಹತ್ತೀನಿ...!
ಲಕ್ಷ್ಮೀಶ್ವರಾ ಬಿಟ್ಟು ಒಂದಿಷ್ಟು ವರ್ಷಾ ಆದಮ್ಯಾಗ ಮತ್ತ ಅಲ್ಲೀಗೆ ಹೋಗಿದ್ದು ಹುಬ್ಬಳ್ಳಿನ್ಯಾಗ ಡಿಗ್ರಿ ಮಾಡಾಕ ಹತ್ತಿದಮ್ಯಾಗ. ಅವತ್ತ ನಮ್ಮ ಗೆಳಿಯಾರೆಲ್ಲಾ ಲಕ್ಷ್ಮೀಶ್ವರದಾಗ ಒಂದು ಪ್ರೋಗ್ರಾಮು ಮಾಡಿದ್ರು. ನಂದು ಅದರಾಗ ಒಂದು ಡಾನ್ಸು ಇತ್ತು. ಪ್ರೋಗ್ರಾಮು ಎಲ್ಲಾ ಮುಗುದು ರಾತ್ರಿ ಎಲ್ಲಾ ಪಾರ್ಟಿ ಮಾಡಿ ಮುಂಜಾನ್ಯಾಗ ಎದ್ದಾಗ ಭರ್ರಂತ ಮಳಿ ಸುರ್ಯಾಕ ಹತ್ತಿತ್ತು.
ರಾತ್ರಿ ಮಕ್ಕೊಂಡಿದ್ದು "ಮೋಡ್ಯಾ"ನ ಹೋಟೆಲ್ ಬೆಂಚಿನ್ಯಾಗ. "ಮೋಡ್ಯಾ"ನ ಹೋಟೆಲ್ ಅಂದ್ರ ನಮಗೆಲ್ಲಾರಿಗೂ ಆತ್ಮೀಯ ತಾಣ. ಹರಟಿ ಹೊಡಿಯೋದಕ್ಕ ಚಹಾ ಕುಡ್ಯಾಕ, ಮಿರ್ಚಿ ತಿನ್ನಾಕ ಅದೇ ಜಾಗ. ನಮ್ಮ ಗೆಳೆಯಾರಿಗೆಲ್ಲಾ ಅದ ಅಡ್ಡಾ ಆಗಿತ್ತು. ಆದ್ರ ನಮ್ಮೆಲ್ಲಾ ಗೆಳಿಯಾರು ಓದಾಕ ಮತ್ತ ಕೆಲಸಾ ಅಂತ ಬ್ಯಾರೆ ಊರಿಗೆ ಹೋದಮ್ಯಾಲ ಲಕ್ಷ್ಮೀಶ್ವರದಾಗ ನಮ್ಮ ಗ್ಯಾಂಗಿನವ್ರು ಉಳದಿದ್ದು ಭಾಳ ಕಡಿಮಿ ಮಂದಿ.
ಸಕತ್ ಕಾಮಿಡಿ ಮನಷ್ಯಾ ಅನಿಸಿದ್ದ "ಮೋಡ್ಯಾ" ಅವಾ ಮಾತ್ರ ಅಲ್ಲಿಂದ ಬ್ಯಾರೆ ಊರಿಗೆ ಹೋಗ್ಲಿಲ್ಲ. ಒಮ್ಮೆ ಪೊಲೀಸ್ ಕೆಲಸಕ್ಕ ಟ್ರೇನಿಂಗಿಗೆ ಹೋಗಿದ್ದಾ. ಆದ್ರ ಅದೂ ಅವಂಗ ಸೆಟ್ಟಾಗ್ಲಿಲ್ಲ. "ಮೋಡ್ಯಾನ ಪೊಲೀಸ್ ಟ್ರೇನಿಂಗ್" ಬಗ್ಗೆ ಮತ್ತ ಯಾವಾಗಾರ ಹೇಳ್ತಿನಿ.
ಮೋಡ್ಯಾ ಅಂದ್ರ ಊರಾಗ ಭಾರಿ ಫೆಮಸ್ಸು. ಅವನ ಚಹಾ ಹೋಟೆಲ್ ಅಂದ್ರ ಯಾವಾಗ್ಲೂ ಜಾತ್ರಿ ಇದ್ದಂಗ. ಮೋಡ್ಯಾಗ ಊರಿನ್ಯಾಗ ಮಾತಾಡಾಕ ಇವರು ಅವರು ಅಂತ ಸೆಲೆಕ್ಷನ್ ಇಲ್ಲಾ. ಎಲ್ಲಾರ್ನೂ ಮಾತಾಡ್ಸೊ ಮನುಷ್ಯಾ ಅವಾ. ಅವತ್ತ ನಾನು ನಮ್ಮ ಗೆಳಿಯಾರ ಪ್ರೋಗ್ರಾಮಿಗೆ ಹೋದಾಗ ಮಾರನೇ ದಿನಾ ಮೋಡ್ಯಾ ಜೊತಿಗೆ ಊರು ಸುತ್ತಾಕ ಹೋಗಿದ್ದೆ.
"ಬಾ ನನ್ನ ಗರ್ಲ್ ಫ್ರೆಂಡ್ ತೋರಸ್ತೀನಿ" ಅಂತಾ ಸಂತಿ ರಸ್ತೇನ್ಯಾಗ ಕರಕೊಂಡು ಹೊಂಟ. ಆಗ ನನಗ ಅನಿಸಿತ್ತು ಇವಾ ಯಾವುದೋ ಒಂದು ವಿಚಿತ್ರ ಕ್ಯಾರೆಕ್ಟರನ್ನ ತೋರಸ್ತಾನ ಅಂತ!
ಮಳಿ ಬಂದ್ ನಿಂತು; ಸಂತಿ ರಸ್ತೇನ್ಯಾಗ ಎಲ್ಲಾ ಕಡೀಗ ಕಿಚಿಕಿಚಿ. ನಾನೂ ಮೋಡ್ಯಾನ ಜೊತಿಗೆ ಹೊಂಟೆ. ಮೋಡ್ಯಾಗ ದಾರಿ ತುಂಬಾ ಗೆಳಿಯಾರು. ಎಲ್ಲಾರ್ ಜೊತಿಗೂ ಒಂದೆರಡು ಮಾತು; ಜೋಕು... ಹಿಂಗ ನಡದು ಸಂತಿ ರಸ್ತೆ ಕೊನ್ಯಾಗ ಇದ್ದ ಒಂದು ಸಣ್ಣ ಡಬ್ಬಿ ಅಂಗಡಿ ಮುಂದ ಬಂದದ್ದಾತು.
ನಾನು ಆ ಅಂಗಡಿ ಕಡೀಗ ನೋಡಿರ್ಲಿಲ್ಲಾ; ಆಗ್ಲೇ ಅಂಗಡಿನ್ಯಾಗಿಂದ ಒಂದು ಹೆಂಗಸಿನ ಧ್ವನಿ "ಲೇ ಮೋಡ್ಯಾ ಯಾವ್ದೋ ಒಂದು ಹೊಸಾ ಮಾಲ್ ಕರಕೊಂಡು ಬಂದಿಯಲ್ಲಾ..." ಅದರ ಹಿಂದೆಯೇ ಜೋರಾಗಿ ನಗು.
ತಿರಗಿ ನೋಡಿದ್ರ ಅಲ್ಲೆ ಸಣ್ಣ ಡಬ್ಬಿನ್ಯಾಗ ಸಿಗಸಿಟ್ಟಂಥ ಮಾಂಸದ ಪರ್ವತಾ. ಸಣ್ಣ ಅಂಗಡಿ ಎರಡೂ ಫಡಕಿಗೂ ತಾಗೋ ಅಷ್ಟು ಅಗಲದ ಹೆಂಗ್ಸು. ಆಕಿ ಉಟ್ಟ ಸೀರಿ ಸಣ್ಣಗಾತೇನೋ ಅನ್ನೋ ಅಷ್ಟು ದೊಡ್ಡ ದೇಹಾ. ಎದೆನಾ ಇಷ್ಟಗಲಾ ತೋರಿಸಿಕೊಂಡು ಕುಂತಿದ್ಲು ಆಕಿ. ಆಕಿಗೆ ಅದು ಅಸಭ್ಯ ಅನ್ಸೋ ಭಂಗಿ ಆಗಿರ್ಲೇ ಇಲ್ಲಾ. ಯಾಕಂದ್ರ ಆಕಿ ಇದ್ದದ್ದ ಅಂಥಾ ಪರ್ವತಧಾಂಗ!
ಮೋಡ್ಯಾನ ಆ ಹಿಡಿಂಬಿ ಗೆಳತಿ ಕಷ್ಟಾ ಪಟ್ಟು ತನ್ನ ಕೈ ಮುಂದ್ ಮಾಡಿ; ನನ್ನ ಕೆನ್ನೇನಾ ಒಮ್ಮೆ ಒತ್ತಿ ಗಿಂಡಿದ್ಲು. ಅದರ ಹಿಂದ ಮತ್ತ ಹೇಳಿದ್ಲು "ಲೇ ಮೋಡ್ಯಾ ಚಿಕಣಿ ಅಡಿಕಿ ಇದ್ದಾಂಗ ಐತಲ್ಲೋ...!" ಜೊತೆಗೆ ಮತ್ತೆ ಹ್ಹ...ಹ್ಹ...ಹ್ಹ... ನಗು. ಅಲ್ಲಿ ಇದ್ದವ್ರೆಲ್ಲಾ ನಕ್ರು.
"ಲೇ ಮೋಡ್ಯಾ ನೀ ಕ್ಯಾನ್ಸಲ್; ಇದ ಮಾಲನ್ನ ನಾ ಮದಿವಿ ಆಗೋದು" ಅಂತ ಮತ್ತ ಅದ ರಾಗದಾಗ ನಕ್ಳು. "ಮದವಿ ಆಗಾಕೂ ಒಂದ್ ಕರಾರು; ನೀ ನಂಗ ಒಂದು ಟಿವಿ ಸೀರಿ ತಂದ್ ಕೊಡಬೇಕು ಅಂದ್ರ ಅಷ್ಟ ಮದವಿ" ಅಂತ ಹೇಳಿ ನನ್ನ ಕಡೀಗ ನೋಡಿ ಮತ್ತ ನಕ್ಳು.
ಸುಮಾರ್ ಒಂದ್ ತಾಸು ಹಿಂಗ ಒಂದಾದ ಮ್ಯಾಗ ಒಂದು ವಿಷ್ಯಾ ಮಾತಾಡಿದ್ಲು ಮೋಡ್ಯಾನ ಆ ಗೆಳತಿ. ಆ ಒಂದು ತಾಸೂ ಆಕಿ ಮುಖದಾಗಿನ ನಗಿ ಮಾಸಲಿಲ್ಲಾ. ಮೋಡ್ಯಾ ಮತ್ತ ಆಕಿ ನಡುವ ಹಾಸ್ಯದ ಜುಗಲ್ಬಂದಿನ ನಡೀತು. ನಾನೂ ಮೈ ಹಗರಾಗೋವಷ್ಟು ನಕ್ಕೆ. ಆಕಿ ಡಬ್ಬಿ ಅಂಗಡಿಯಿಂದ ಹೊರಡೋವಾಗ ಅವ್ಳು ಒಂದು ಬಾಟ್ಲಿಯಿಂದ ಎರಡು "ಶೇಂಗಾ ಚಿಕ್ಕಿ" ತಗದು ನನ್ನ ಕೈಗೆ ಮತ್ತ ಮೋಡ್ಯಾನ ಕೈಗೆ ಇಟ್ಲು.
ಅಲ್ಲಿಂದ ಹೊಂಟಾದಮ್ಯಾಗ ಮೋಡ್ಯಾ ಹೇಳಿದ "ಎಷ್ಟರ ಕಷ್ಟಾ ಇರ್ಲಿ ಇಕಿಹಂಗ ನಗತಿರ್ಬೇಕು" ಅಂತ. ಹೌದು; ನಲ್ವತ್ತೆಂಟು ವರ್ಷದ ಆ ಹೆಂಗಸು ತಾನು ಜೀವನ್ದಾಗ ಕಂಡ ಎಲ್ಲಾ ಕಷ್ಟಾನೂ ಮರ್ಯಾಗ ಇಟ್ಟು ನಗ್ತಾಳ; ನಗಸ್ತಾಳ!